ಅಂತರ್ಜಾಲದ ಆತ್ಮೀಯ ಮಿತ್ರರಿಗೆಲ್ಲಾ ವಸಂತಾಗಮನದ ಶುಭಾಶಯಗಳು....
ಸ್ನೇಹಿತರೇ ನಿಮಗೆಲ್ಲಾ ತಿಳಿದಿರುವಂತೆ ನಾವು "ಹರಿಕಥಾಮೃತಸಾರ" ಗ್ರಂಥದ ಮೊದಲ ಸಂಧಿ, "ಮಂಗಳಾಚರಣ ಸಂಧಿ"ಯನ್ನು ಶ್ರೀಹರಿಯ ಕೃಪೆ ಮತ್ತು ಕರುಣೆಯಿಂದ ನಮಗೆ ತಿಳಿದಷ್ಟು, ವಿವರಿಸುವ ಪ್ರಯತ್ನ ಮಾಡಿದ್ದೆವು. ಮೊದಲ ಸಂಧಿಯ ವಿವರಣೆ .. ಮುಗಿದಿದ್ದು ಈಗ ನಾವು ಹರಿಕಥಾಮೃತಸಾರ ಗ್ರಂಥದ ಎರಡನೆಯ ಸಂಧಿಯಾದ "ಕರುಣಾ ಸಂಧಿ"ಯನ್ನು
ಎಲ್ಲರಿಗೂ ಹೊಸ ಸಂವತ್ಸರದ ಹಾರ್ದಿಕ ಶುಭಾಶಯಗಳು.... ನೂತನ ವರ್ಷಾರಂಭವನ್ನು ನಮ್ಮ ಹರಿಕಥಾಮೃತಸಾರ ತಿಳಿಯುವ ಪ್ರಯತ್ನ ಮಾಡುತ್ತಾ ಅನವರತವೂ ಹರಿಯ ಧ್ಯಾನವನ್ನು ಮಾಡೋಣ ಬನ್ನಿ.
ಕರುಣಾಸಂಧಿಗೆ ಒಂದು ಚಿಕ್ಕ ಮುನ್ನುಡಿಯ ಬರಹದೊಂದಿಗೆ ನಿಮ್ಮನ್ನು ಸ್ವಾಗತಿಸುತ್ತೇವೆ...
ಸತ್ಯವತಿ
ಅನಂತ್ ರಾಜ್
ಶ್ಯಾಮಲಾ
2 comments:
ಮಾನ್ಯರೇ, 'ನಂದನ' ನಾಮ ಸಂವತ್ಸರಕ್ಕೆ ಮುಂದಿನ ಕರುಣಾ ಸಂಧಿಯ ವಿಚಾರಲಹರಿಯನ್ನು ನೀವುಗಳು ಓದುಗರಿಗೆ ಕೊಡುತ್ತಿರುವುದು ನಿಜಕ್ಕೂ ಸಂತಸದ ವಿಷಯ..
ನಿಮ್ಮ ಈ ಕೆಲಸವು ಸುಗಮವಾಗಿ ಸಾಗಲಿ. ನಮ್ಮೆಲ್ಲರನ್ನೂ ತಲುಪಲಿ.
ಶುಭಾಶಯಗಳೊಂದಿಗೆ,
ಹರಿಕಥಾಮೃತಸಾರ ಗ್ರಂಥದ ಕರುಣಾಸಂಧಿಯ ವಿವರಣೆಯನ್ನು ನೂತನ ಸಂವತ್ಸರದಲ್ಲಿ ಪ್ರಾರಂಭ ಮಾಡುವ ನಿಮ್ಮ ಆಶಯವನ್ನು ಪ್ರಕಟಿಸಿರುವಿರಿ. ನಿಮ್ಮ ಈ ಕೆಲಸ ಸುಸೂತ್ರವಾಗಿ ನೆರವೇರಲಿ ಎಂದು ಆಶಿಸುತ್ತೇನೆ ಮತ್ತು ನಾವೂ ಸಹ ನಿಮ್ಮ ಮಾಹಿತಿಪೂರ್ಣ ಬರಹವನ್ನು ಓದಲು ನಾನು ಕಾತರಳಗಿದ್ದೇನೆ.ನಿಮಗೆಲ್ಲರಿಗೂ ನಂದನ ಸಂವತ್ಸರದ ಶುಭಾಶಯಗಳು.
Post a Comment